ಸನಾತನ ಧರ್ಮದ ಅನುಯಾಯಿಗಳಿಗೆ ಹಾಗೂ ವೇದಾಸಕ್ತರಿಗೆ ಅನುಕೂಲ ವಾಗುವಂತೆ, ಋಗ್ವೇದಿಯ ಹಾಗೂ ಯುಜುರ್ವೇದಿಯ ಉಪಯುಕ್ತ ಮಂತ್ರಗಳನ್ನು ಕಲಿಸುವುದರೊಂದಿಗೆ, ನಿತ್ಯ ಅನುಷ್ಟಾನಕ್ಕೆ ಅಗತ್ಯವಿರುವ ಸಂಧ್ಯಾವಂದನೆ, ನಿತ್ಯ ದೇವತಾರ್ಚನೆ ಇತ್ಯಾದಿಗಳ ಮಂತ್ರ ಭಾಗ ಮತ್ತು ವಿಧಿ ವಿಧಾನಗಳನ್ನು ಹೇಳಿಕೊಡ ಲಾಗುವುದು ಹಾಗೂ ವೇದದ ಅಂಗವೆಂದು ಕರೆಯಿಸಿಕೊಳ್ಳುವ ಜ್ಯೋತಿಷ ಜ್ಞಾನವನ್ನು ಹೇಳಿಕೊಡುವ ತರಗತಿಗಳನ್ನು ಸಹ ಪಾಠಶಾಲವತಿಯಿಂದ ಆಯೋಜಿಸಲಾಗಿದೆ.
ಅಗ್ನಿಕಾರ್ಯ, ಬ್ರಹ್ಮಯಜ್ಞ, ಔಪಾಸನೆ ಇತ್ಯಾದಿ ಅನುಷ್ಠಾನಗಳನ್ನು ಕಲಿಸುವುದು. ಮುಖ್ಯವಾಗಿ ಅಪೌರುಷೇಯವಾದ ವೇದ ಜ್ಞಾನವನ್ನು ಆಸಕ್ತರಿಗೆ ಸುಲಭವಾಗಿ ತಲುಪಿಸುವ ಪ್ರಯತ್ನವು ಶ್ರೀ ಸನಾತನ ವೇದ ಪಾಠ ಶಾಲೆಯ ಉದ್ದೇಶ ಮತ್ತು ಗುರಿಯಾಗಿರುತ್ತದೆ.
ಮುಂದೆ ಓದಿ