ಸನಾತನವೇದಪಾಠಶಾಲಾ

ಸನಾತನವೇದಪಾಠಶಾಲಾ

ಸನಾತನ ಧರ್ಮದ ಅನುಯಾಯಿಗಳಿಗೆ ಹಾಗೂ ವೇದಾಸಕ್ತರಿಗೆ ಅನುಕೂಲವಾಗುವಂತೆ, ಋಗ್ವೇದೀಯ ಹಾಗೂ ಯುಜುರ್ವೇದೀಯ ಉಪಯುಕ್ತ ಮಂತ್ರಗಳನ್ನು ಕಲಿಸುವುದರೊಂದಿಗೆ, ನಿತ್ಯ ಅನುಷ್ಟಾನಕ್ಕೆ ಅಗತ್ಯವಿರುವ ಸಂಧ್ಯಾವಂದನೆ, ನಿತ್ಯ ದೇವತಾರ್ಚನೆ,ಅಗ್ನಿಕಾರ್ಯ,ಬ್ರಹ್ಮಯಜ್ಞ ಮತ್ತು ಔಪಾಸನೆ ಇತ್ಯಾದಿಗಳ ಮಂತ್ರ ಭಾಗ ಮತ್ತು ವಿಧಿ ವಿಧಾನಗಳನ್ನು ಹೇಳಿಕೊಡಲಾಗುವುದು ಹಾಗೂ ವೇದದ ಅಂಗವೆಂದು ಕರೆಯಿಸಿಕೊಳ್ಳುವ ಜ್ಯೋತಿಷ ಜ್ಞಾನವನ್ನೂ ಹೇಳಿಕೊಡುವ ತರಗತಿಗಳನ್ನು ಸಹ ಪಾಠಶಾಲವತಿಯಿಂದ ಆಯೋಜಿಸಲಾಗಿದೆ. ಇದರ ಜೊತೆಗೆ ಪಾಠಶಾಲೆಯಲ್ಲಿ ಯೋಗ ತರಬೇತಿ ಮತ್ತು ಸ೦ಸ್ಕೃತ ಪಾಠಗಳನ್ನೂ ಮಾಡಲಾಗುತ್ತಿದೆ.

ಶ್ರೀ ಸನಾತನವೇದಪಾಠಶಾಲೆಯು ದಿನಾಂಕ 26-01-2018 ರಂದು ಬೆಂಗಳೂರಿನ ಉತ್ತರ ತಾಲ್ಲೂಕಿನಲ್ಲಿರುವ ವಿದ್ಯಾರಣ್ಯಪುರದಲ್ಲಿ ವೇದಪುರುಷನ ಅನುಗ್ರಹದಿಂದ ಶುಭಾರಂಭವಾಯಿತು. ಈ ವೇದಪಾಠಶಾಲೆಯ ಪ್ರವರ್ತಕರಾದ ವೇದಬ್ರಹ್ಮ.ಶ್ರೀ ಹರೀಶ ಶರ್ಮರವರು (ಶೈವಾಗಮ ಪ್ರವೀಣ) ಆದಿಯಲ್ಲಿ ಗುರುಮುಖೇನ ಪದ್ಧತಿಯಲ್ಲಿ ವೇದಪಾಠವನ್ನು ಆರಂಭಿಸಿ ಪ್ರಸ್ತುತ ಅಂತರ್ಜಾಲದ - ONLINE ಮಾಧ್ಯಮದಲ್ಲಿಯೂ ಈ ಕೆಳಕಂಡ ಪ್ರಶಿಕ್ಷಣಗಳನ್ನು ಹೇಳಿಕೊಡುತ್ತಿದ್ದಾರೆ.


  • ವೇದಮಂತ್ರಗಳನ್ನು ಮತ್ತು ನಿತ್ಯ ದೇವತಾರ್ಚನೆಯನ್ನು ಕಲಿಸುವುದು.
  • ಜ್ಯೋತಿಷ್ಯ ಶಾಸ್ತ್ರ ಮತ್ತು ವಾಸ್ತು ಶಾಸ್ತ್ರಗಳನ್ನು ಕಲಿಸುವುದು.
  • ಯೋಗಾಸನ ಮತ್ತು ಪ್ರಾಣಯಾಮ ತರಗತಿಗಳನ್ನು ನಡೆಸುವುದು.
  • ಸಂಸ್ಕೃತ ವ್ಯಾಕರಣ ಶಿಕ್ಷಣ ಮತ್ತು ಕನ್ನಡ ವ್ಯಾಕರಣ ಶಿಕ್ಷಣ ಹೇಳಿಕೊಡುವುದು.
  • ಹತ್ತು ವರ್ಷದ ಕೆಳಗಿನ ಮಕ್ಕಳಿಗೆ ಬಾಲಬೋದ ಇತ್ಯಾದಿಗಳನ್ನು ಕಲಿಸುವುದು.
  • ಅಗ್ನಿಕಾರ್ಯ ಮತ್ತು ಔಪಾಸನೆ (ಅಗ್ನಿಹೋತ್ರ) ಕಲಿಸುವುದು.
  • ವ್ರತ ಹಬ್ಬ ಹರಿದಿನಗಳ ಆಚರಣೆ ಮತ್ತು ಅವುಗಳ ಮಹತ್ವಗಳನ್ನು ಕಲಿಸುವುದು.
  • ಷೋಡಷ [ಹದಿನಾರು] ಧಾರ್ಮಿಕ ಸಂಸ್ಕಾರಗಳನ್ನು ಕಲಿಸುವುದು.
  • ಸ್ತ್ರೋತ್ರ ಮತ್ತು ಶ್ಲೋಕಗಳನ್ನು ಕಲಿಸುವುದು.
  • ಪೌರೋಹಿತ್ಯ ಸೇವೆಯನ್ನು ಒದಗಿಸುವುದು.